ಇದು ಎಲೆಗಳ ಸಿಂಪಡಣೆಗಾಗಿ ಹೆಚ್ಚಿನ ಸಾಂದ್ರತೆಯ ಸತುವನ್ನು ಹೊಂದಿದೆ ಮತ್ತು ಸಸ್ಯದ ಒಳಗೆ ಉತ್ತಮ ಚಲನಶೀಲತೆಯಿಂದ ಪ್ರವೇಶಿಸಿ, ವಿವಿಧ ಬೆಳೆಗಳಲ್ಲಿ ಜಿಂಕ್ ಕೊರತೆಯನ್ನು ತಡೆಯಲು ಸಹಾಯಕಾರಿ.
ಹೊಂದಾಣಿಕೆ
ಇತರ ರಸಗೊಬ್ಬರಗಳೊಂದಿಗೆ ಹೊಂದಿಕೊಳ್ಳುತ್ತದೆ
ಅನ್ವಯಿಸುವ ಅವಧಿ
ಕೀಟಗಳ ಪ್ರಭಾವ ಅಥವಾ ರೋಗದ ತೀವ್ರತೆಯನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ‘ತಜ್ಞರ ಸಹಾಯ ಬೇಕು’ ಬಟನ್ ಕ್ಲಿಕ್ ಮಾಡಿ.
ಅನ್ವಯವಾಗುವ ಬೆಳೆಗಳು
ದ್ರಾಕ್ಷಿ, ದಾಳಿಂಬೆ, ಬಾಳೆಹಣ್ಣು, ಮಾವು, ಸೇಬು, ನಿಂಬೆ ಮತ್ತು ಇತರ ಹಣ್ಣುಗಳು. ತರಕಾರಿಗಳು - ಟೊಮೆಟೊ, ಮೆಣಸಿನಕಾಯಿ, ಬದನೆ ಮತ್ತು ಇತರ ತರಕಾರಿಗಳು. ಗೆಡ್ಡೆ ಬೆಳೆಗಳು -ಈರುಳ್ಳಿ, ಆಲೂಗಡ್ಡೆ, ಮೂಲಂಗಿ ಮತ್ತು ಎಲ್ಲಾ ಎಲೆಗಳ ತರಕಾರಿಗಳು. ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಹತ್ತಿ, ಕಬ್ಬು, ಹೂವುಗಳು ಮತ್ತು ಅಲಂಕಾರಿಕ ಬೆಳೆಗಳು.
ಹೆಚ್ಚುವರಿ ವಿವರಣೆ
ಇದು ಲಭ್ಯವಿರುವ ಜಿಂಕ್ ನ ಅತ್ಯಧಿಕ ಸಾಂದ್ರತೆಯನ್ನು ಹೊಂದಿದೆ. ಇದು ದೀರ್ಘಕಾಲೀನ ಪೋಷಕಾಂಶ ಪೂರೈಕೆ ಪ್ರಭಾವ ಹೊಂದಿದೆ. ಜಿಂಕ್ ಕ್ಲೋರೊಫಿಲ್ ಮತ್ತು ಕಾರ್ಬೋಹೈಡ್ರೇಟ್ ರಚನೆಯಲ್ಲಿ ತೊಡಗಿಸಿಕೊಂಡಿದೆ. ಇದು ಆಕ್ಸಿನ್‌ಗಳ ನಿರ್ಮಾಣವನ್ನು ಉತ್ತೇಜಿಸುತ್ತದೆ ಹಾಗೂ ಬೆಳವಣಿಗೆಯ ನಿಯಂತ್ರಣ ಮತ್ತು ಕಾಂಡಗಳನ್ನು ಉದ್ದ ಮಾಡುವುದಕ್ಕೆ ಸಹಾಯಕಾರಿ.
ವಿಶೇಷ ಟಿಪ್ಪಣಿ
ಇಲ್ಲಿ ನೀಡಲಾದ ಮಾಹಿತಿಯು ಉಲ್ಲೇಖಕ್ಕಾಗಿ ಮಾತ್ರ. ಇದು ಸಂಪೂರ್ಣವಾಗಿ ಮಣ್ಣಿನ ಪ್ರಕಾರ ಮತ್ತು ಹವಾಮಾನ ಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಸಂಪೂರ್ಣ ಉತ್ಪನ್ನ ವಿವರಗಳು ಮತ್ತು ಬಳಕೆಗೆ ನಿರ್ದೇಶನಗಳಿಗಾಗಿ ಯಾವಾಗಲೂ ಉತ್ಪನ್ನದ ಲೇಬಲ್‌ಗಳು ಮತ್ತು ಅದರೊಂದಿಗೆ ಇರುವ ಲೀಫ್ಲೆಟ್ ಗಳನ್ನು ನೋಡಿ.